ನೆಫಿಲೀನ್-
ಸೋಡಿಯಮ್ ಅಲ್ಯೂಮಿನಿಯಮ್ ಸಿಲಿಕೇಟ್ ಸಂಯೋಜನೆಯುಳ್ಳ ಖನಿಜ. ಷಟ್ಫಲಕ ಗಣದಲ್ಲಿ ಸ್ಫಟಿಕೀಕರಿಸುತ್ತದೆ. ಇದರ ರಾಸಾಯನಿಕ ಸೂತ್ರವನ್ನು ತಾತ್ತ್ವಿಕವಾಗಿ  ಎಂದು ಹೇಳಬಹುದು. ಆಶ್ರಗ ರೂಪದಲ್ಲಿಯೇ ಅಲ್ಲದೆ ಅಸ್ಫಟಿಕ ರೂಪದ ಕಣಗಳಲ್ಲೂ ಈ ಖನಿಜ ಕಂಡುಬರುತ್ತದೆ. ನಿರ್ವರ್ಣ, ಬಿಳುಪು, ಹಳದಿ ಬಣ್ಣಗಳÀಲ್ಲಿ ದೊರೆಯುತ್ತದೆ. ಅಸ್ಫಟಿಕ ರೂಪದ ನೆಫಿಲೀನಿನ ಬಣ್ಣ ದಟ್ಟಹಸಿರು, ಹಸಿರು, ನೀಲಿ ಮಿಶ್ರಿತ ಬೂದು, ಕಂದುಗೆಂಪು ಮತ್ತು ಇಟ್ಟಿಗೆ ಕೆಂಪು. ಅಶ್ರಗದ 1010 ಮುಖಕ್ಕೆ ಸಮಾಂತರವಾಗಿ ಸೀಳುಗಳು ಕಂಡುಬರುತ್ತವೆ. ಛಿ ಅಕ್ಷಕ್ಕೆ ಲಂಬವಾಗಿ ಉಂಟಾಗುವ ಸೀಳುಗಳು ಅಪೂರ್ಣವಾದವು. ಈ ಖನಿಜ ಅರೆಶಂಖಾಕೃತಿಯಲ್ಲಿ ಬಿರಿಯುತ್ತದೆ. ಅತಿ ಭಿದುರ, ಬಿಳಿಯ ಒರೆ, ಪಾರ ಅಪಾರಕ ಗುಣದ ನೆಫಿಲೀನಿನ ಕಾಠಿಣ್ಯ 5.5-6. ಸಾಪೇಕ್ಷ ಸಾಂದ್ರತೆ 2.55-2.65. ಗಾಜಿನಂಥ ಹೊಳಪಿದೆ.
(ಟಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ